Promote your company/organization in our website through advertisements! For more queries, mail us to: gkmandaladelhi@gmail.com

Our culture embedded in our roots
 
															 ಹವ್ಯಕತನವು ಬ್ರಾಹ್ಮಣ್ಯವೆಂಬ ಶ್ರೇಷ್ಠ ಸಂಸ್ಕೃತಿಯ ಹಿನ್ನೆಲೆಯುಳ್ಳದ್ದಾಗಿದೆ. ಭದ್ರವೂ, ದಿವ್ಯವೂ ಆದ ಸನಾತನ ವೈದಿಕ ಸಂಸ್ಕೃತಿಯೇ ಬ್ರಾಹ್ಮಣ್ಯದ ಜೀವಾಳ. ಆದ್ದರಿಂದ ಬ್ರಾಹ್ಮಣ್ಯದ ರಕ್ಷಣೆಯ ಮೂಲಕವೇ ಹವ್ಯಕತನವನ್ನು ಉಳಿಸಿಕೊಂಡು ಹೋಗಬೇಕಾದ ಮಹತ್ತರ ಜವಾಬ್ದಾರಿಯು ನಮ್ಮದಾಗಿದೆ. ’ಬ್ರಾಹ್ಮಣಸ್ಯ ಹಿ ದೇಹೋಯಂ ಕ್ಷುದ್ರ ಕಾಮಾಯ ನೇಷ್ಯತೇ| ಕೃಚ್ಛ್ರಾಯ ತಪಸೇ ಚೇಹ ಪ್ರೇತ್ಯಾನಂತಸುಖಾಯ ಚ|| ಬ್ರಾಹ್ಮಣ್ಯವೆಂಬುದು ಕೇವಲ ಒಂದು ಜಾತಿ, ಮತ, ಪಂಥಕ್ಕಷ್ಟೇ ಸೀಮಿತ ವಿಷಯವಲ್ಲ. ಜೀವನದ ಪರಮೋದ್ದೇಶವನ್ನು ಸಾಧಿಸಿಕೊಳ್ಳುವುದಕ್ಕಾಗಿ ಭಗವಂತನು ಅನುಗ್ರಹಿಸಿದ ಅತ್ಯಂತ ದುರ್ಲಭವಾದ ಅವಕಾಶವಿದು. ಭಾರತೀಯ ಪರಂಪರೆಯ ಸುದೀರ್ಘ ಇತಿಹಾಸವನ್ನು ಅವಲೋಕಿಸಿದಾಗ ಬ್ರಾಹ್ಮಣ್ಯವು ಸುರಕ್ಷಿತವಾಗಿರುವಾಗ ರಾಷ್ಟ್ರದಲ್ಲಿ ಸುಭಿಕ್ಷ-ಸಮೃದ್ಧಿ-ಸ್ವಾಸ್ಥ್ಯವು ಉಂಟಾಗಿರುವುದು ಕಂಡುಬರುತ್ತದೆ. ಬ್ರಾಹ್ಮಣ್ಯಕ್ಕೆ ಧಕ್ಕೆಯುಂಟಾದಾಗ ರಾಷ್ಟ್ರಕ್ಕೆ ಆಪತ್ತುಗಳು ಬಂದೊದಗಿರುವುದೂ ಕಂಡುಬರುತ್ತದೆ. ಈ ಹಿನ್ನೆಲೆಯಲ್ಲಿ ಜಗತ್ತಿನ ಒಳಿತಿಗೆ ಕಾರಣವಾದ ಧರ್ಮವು ಬ್ರಾಹ್ಮಣ್ಯದ ಸತ್ವವೆಂದು ತಿಳಿದುಬರುತ್ತದೆ. ಆಧುನಿಕತೆಯ ವ್ಯಾಮೋಹ, ಸ್ವಧರ್ಮದ ಕಡೆಗಣನೆ, ಪರಧರ್ಮದ ಆಕರ್ಷಣೆ ಇವೇ ಮೊದಲಾದ ಪ್ರಮಾದಗಳಿಂದ ಉಂಟಾದ-ಉಂಟಾಗುತ್ತಿರುವ ಅನೇಕ ಆಪತ್ತು-ವಿಪತ್ತುಗಳನ್ನು ಎದುರಿಸಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಹವ್ಯಕರ ಸಂಪ್ರದಾಯ-ಸಂಸ್ಕೃತಿಗಳನ್ನು ಚೆನ್ನಾಗಿ ಅರಿತು, ಆ ಬಗ್ಗೆ ಶ್ರದ್ಧೆ, ಆದರಗಳನ್ನು ಉಳಿಸಿ-ಬೆಳೆಸಿಕೊಳ್ಳುವುದರ ಜೊತೆಯಲ್ಲಿ ಮುಂದಿನ ತಲೆಮಾರಿಗೆ ಅದನ್ನು ವ್ಯವಸ್ಥಿತವಾಗಿ ತಲುಪಿಸುವ ಗುರುತರ ಜವಾಬ್ದಾರಿಯನ್ನು ಸಂಘಟಿತ ಪ್ರಯತ್ನದ ಮೂಲಕ ನಿರ್ವಹಿಸಬೇಕಾಗಿದೆ. ಈ ದಿಸೆಯಲ್ಲಿ ’ಗೋಕರ್ಣಮಂಡಲ’ವೆಂಬ ಹವ್ಯಕರ ಸಂಘಟನೆಯು ಸದಾ ಕ್ರಿಯಾಶೀಲವಾಗಿರಲೆಂದು ಆಶಿಸುತ್ತೇವೆ.

ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು
ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ
 ರಾಷ್ಟ್ರದ ರಾಜಧಾನಿಯಲ್ಲಿ ಐದು ದಶಕಗಳಿಂದ ಹವ್ಯಕ ಸಂಘಟನೆಯನ್ನು ನಡೆಸಿಕೊಂಡು ಬಂದಿರುವುದು ಹೆಮ್ಮೆಯ ವಿಚಾರ. ಗೋಕರ್ಣಮಂಡಲ ಎಂಬ ಹೆಸರೂ ಕೂಡಾ ಅರ್ಥ ಪೂರ್ಣ. ಸಂಘಟನೆಯು ಇಲ್ಲಿಯವರೆಗೆ ನಡೆಸಿದ ಕಾರ್ಯಕ್ರಮಗಳೂ ಪ್ರಶಂಸಾರ್ಹ.

ಇದೀಗ ಇಂದಿನ ಜಗತ್ತಿನ ಸಂವಹನಕ್ಕೆ ಅತ್ಯಗತ್ಯವಾದ ಅಂತರ್ಜಾಲ ತಾಣವನ್ನು ಸಿದ್ಧಗೊಳಿಸಿರುವುದು ಯೋಗ್ಯವಾದದ್ದು. ಆಕಸ್ಮಿಕವಾಗಿ ಒದಗಿದ ಸನ್ನಿವೇಶದಲ್ಲಿ ಇದು ಹೆಚ್ಚು ಉಪಯುಕ್ತ ಮಾತ್ರವಲ್ಲದೆ, ಶಾಶ್ವತವಾಗಿಯೂ ಪರಸ್ಪರ ವಿಚಾರ ವಿನಿಮಯ, ಪ್ರತಿಭಾ ದರ್ಶನ, ಸದ್ವಿಚಾರ ಪ್ರಸರಣ, ಸಂಘಟನೆ ಎಲ್ಲದಕ್ಕೂ ಆವಶ್ಯಕ.
ಅಂತರ್ಜಾಲ ತಾಣವಿದು ಸರ್ವಾಂಗಪೂರ್ಣವಾಗಿ ಮೂಡಿಬರಲಿ, ಇದರಿಂದ ನಿಮ್ಮ ಆಶೋತ್ತರಗಳು ಈಡೇರಲಿ, ಸಂಘಟನೆ ಬಹುಕಾಲ ಬಾಳಲಿ.
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು
ಶ್ರೀ ಸಂಸ್ಥಾನ ಗೋಕರ್ಣ- ಶ್ರೀ ರಾಮಚಂದ್ರಾಪುರ ಮಠ