ಹವ್ಯಕರ ಆತಿಥ್ಯ ಪರಂಪರೆ: ಅತಿಥಿ ದೇವೋ ಭವ!

ಡಾ. ಶ್ರೀಪಾದ ಭಟ್ಟ (ಗುರುಗ್ರಾಮ, ಹರಿಯಾಣ)

ಅತಿಥಿ ದೇವೋ ಭವ!” (ಅತಿಥಿಯನ್ನು ದೇವರನ್ನಾಗಿ ನೋಡು) – ಹವ್ಯಕರ ಮನೆಗಳಲ್ಲಿ ಎಷ್ಟೊಂದು ಸಮಂಜಸ ವೇದ ವಾಕ್ಯ! ಮನೆಗೆ ಯಾರೇ ಬರಲಿ, ಅವರನ್ನು ಎಲ್ಲರೂ ಸರಿಯಾಗಿ ಮಾತನಾಡಿಸಿ – “ಎಲ್ಲಾ ಆರಾಮ, ಬನ್ನಿ, ಕುಳಿತುಕೊಳ್ಳಿ“, ಅಂತ ಹೇಳಿ, ತಕ್ಷಣವೇ ಅವರಿಗೆ ಕಾಲು ತೊಳೆಯಲು ನೀರು ಕೊಟ್ಟು, ಬಗ್ಗಿ ನಮಸ್ಕಾರ ಮಾಡುವದು, ಮೊದಲಿಂದಲೂ ನಡೆದುಕೊಂಡ ಬಂದ ಪದ್ಧತಿ. ದೊಡ್ಡವರಿಂದ ಹಿಡಿದು ಚಿಕ್ಕ ಚಿಕ್ಕ ಮಕ್ಕಳವರೆಗೆ ಮನೆಗೆ ಬಂದವರನ್ನು ಮಾತಾಡಿಸುವದು, ಒಂದು ತರಹ ಅಲಿಖಿತ ನಿಯಮ” (unwritten rule) ಎಂದರೆ ತಪ್ಪಾಗಲಾರದು. ಇಲ್ಲಿ ಸೂಕ್ಷ್ಮವಾಗಿ ನೋಡುವ ವಿಷಯವೆಂದರೆ, ಮನೆಗೆ ಬಂದ ಅತಿಥಿಯು ತನ್ನನ್ನು ಯಾರೂ ಮಾತನಾಡಿಸಿಲ್ಲಅಂತ ಒಳ ಮನಸ್ಸಿನಲ್ಲೂ ಅಂದುಕೊಳ್ಳಬಾರದು, ತ್ತು ಅತಿಥಿಯು ಪಚಾರಿಕತೆಯಿಂದ ಸಂತುಷ್ಟನಾಗಬೇಕು, ಎನ್ನುವದು ತಿಥೇಯನ ಆಸೆ.

ಬಂದ ಅತಿಥಿಗಳ ಪರಿಚಯವಿದ್ದರೆ, ಅವರ ಹೆಸರನ್ನು ಹೇಳಿ ಮಾತನಾಡಿಸುವದು“, ಬಂದವರ ಪರಿಚಯವಿಲ್ಲದಿದ್ದರೆ ಏನೂ ತೊಂದರೆ ಎಲ್ಲಾ, “ಆರಾಮ ಇದ್ರ, ಬನ್ನಿ.. ” ಇತ್ಯಾದಿಯಾಗಿ ಬರಮಾಡಿಕೊಳ್ಳುವದು. ಅಕಸ್ಮಾತ, ದಾರಿ ತಪ್ಪಿ ಬಂದ ವ್ಯಕ್ತಿ ಯಾ ತಮಗೆ ಸ್ವಲ್ಪವೂ ಗೊತ್ತಿಲ್ಲದ ಅತಿಥಿ ಬಂದ ಅಂತ ಆದರೆ, ಅಪ್ಪನನ್ನೋ ಅಥವಾ ಅಮ್ಮನನ್ನೋ ಜೋರಾಗಿ ಕರೆದು, ಬರಮಾಡಿಕೊಳ್ಳುವ ವ್ಯವಸ್ಥೆ ಮಾಡುವದು. ಒಟ್ಟಿನಲ್ಲಿ, ಬಂದ ಅತಿಥಿಯನ್ನು ಸರಿಯಾಗಿ ಉಪಚರಿಸುವದು, ಸಣ್ಣಂದಿನಿಂದಲೂ ಹೇಳಿಕೊಟ್ಟ ಪಾಠ.

ಉತ್ತರ ಭಾರತದಲ್ಲಿ ಬಹಳ ಕಡೆಯೂ ಬಂದ ಹಿರಿಯರಿಗೆ ಬಗ್ಗಿ ನಮಸ್ಕಾರ ಮಾಡುವ ಪದ್ಧತಿ ರೂಡಿಯಲ್ಲಿ ಇದೆ. ಆದರೆ, ನನಗೆ ತಿಳಿದ ಹಾಗೆ, ಇಲ್ಲಿ ಈ ರೀತಿ ನಡೆದುಕೊಳ್ಳುವದು ಕೇವಲ ತಮ್ಮ ಹಿರಿಯ ಸಂಬಂಧಿಗಳು ಬಂದಾಗ ಅಥವಾ ತಮಗೆ ಗೊತ್ತಿದ್ದವರಿಗಾದರೆ. ಮನೆಗೆ ಬಂದವರನ್ನು ಎಲ್ಲರೂ ಮಾತನಾಡಿಸುವದು“, ನನಗೆ ತಿಳಿದ ಪ್ರಕಾರ, ಕೇವಲ ಹವ್ಯಕರಲ್ಲಿ ಮಾತ್ರ ಕಾಣಬಹುದು.

ಇಲ್ಲಿ ನನ್ನ ಅಭಿಪ್ರಾಯ, ಬೇರೆ ಜನಾಂಗ ಅಥವಾ ಬೇರೆ ಸಮುದಾಯದವರು ಅತಿಥಿಗಳನ್ನು ಸರಿಯಾಗಿ ನೋಡಿಕೊಳ್ಳಲ್ಲ ಅಂತ ಅಲ್ಲ. ಆದರೆ, ಅದರಲ್ಲಿಯ ವ್ಯತ್ಯಾಸವನ್ನು ತೋರಿಸಲು ನಾನು ಪ್ರಯತ್ನಿಸುತ್ತಿದ್ದೇನೆ. ಹೆಚ್ಚಾಗಿ ನೀವು ಯಾರಾದರೂ ಸ್ನೇಹಿತರ ಮನೆಗೆ ಹೋದರೆ, ಅವನು ಯಾ ಅವಳು ಬಂದು ನಿಮ್ಮ ಹತ್ತಿರ ಸುದ್ದಿಹೇಳಿ, ಯಾ ಅವರ ಅಮ್ಮ ಬಂದು ನಿಮಗೆ ಚಾ ಕಾಫಿ ವಿಚಾರಿಸಿ ಹೋಗುತ್ತಾರೆ. ಮನೆಯ ಬೇರೆಯವರು ಎದುರಾದರೆ, ಒಂದು ಮುಗುಳು ನಗೆನೋ ಅಥವಾ ಹಾಯ್ನೋ ಆಗಬಹುದು ಅಷ್ಟೇ. ಆದರೆ, ಬ್ಬ ಹವ್ಯಕ ಸ್ನೇಹಿತನ ಮನೆಗೆ ಹೋದರೆ, ಹೋದ ತಕ್ಷಣ ಅವನ ಅಜ್ಜಿಯಿಂದ ಹಿಡಿದು ಅವನ ಅಕ್ಕನ ೫೬ ವರ್ಷದ ಮಗಳವರೆಗೆ, ಎಲ್ಲರೂ ಬಂದು ಮಾತನಾಡಿಸಿನಿಮ್ಮ ಮನೆಯವರ ಬಗ್ಗೆ, ಅಪ್ಪನ ಅಮ್ಮನ ಆರೋಗ್ಯದ ಬಗ್ಗೆ, ಇತ್ಯಾದಿ ಕೇಳದಿದ್ದರೆ, ಅದು ಹವ್ಯಕರ ಲಕ್ಷಣವೇ ಅಲ್ಲಾ.

ಹವ್ಯಕರಿಗೆ ಆತಿಥ್ಯಜೀವನದ ಒಂದು ಅವಿಭಾಜ್ಯ ಅಂಗ ಅಂದರೆ ತಪ್ಪಾಗಲಾರದು. ನನಗೆ ನೆನಪಿರುವ ಹಾಗೆ, ನಾವು ಚಿಕ್ಕವರಿರುವಾಗ, ಅಮ್ಮ ಯಾವಾಗಲೂ ಮನೆಯಲ್ಲಿ ರಾತ್ರಿ ಸ್ವಲ್ಪ ಜಾಸ್ತಿ ಅನ್ನ ಮಾಡಿ, ಒಂದು ಲೋಟ ಹಾಲು ಬೇರೆ ತೆಗೆದಿಡುವದು, ದಿನ ನಿತ್ಯದ ಪದ್ಧತಿ. ಅಮ್ಮನ ಹತ್ತಿರ ಕಾರಣ ಕೇಳಿದರೆ, “ರಾತ್ರಿ ಯಾರಾದರೂ ಕೊನೆಯ ಬಸ್ಸಿಗೆ ಬಂದರೆ, ಅವರಿಗೆ ಊಟಕ್ಕೆ ಇರಲಿಅಂತ! ಯಾರೂ ಬಂದಿಲ್ಲ ಅಂದರೆ, ಮರುದಿನ ನಾವೇ ಯಾವುದಕ್ಕಾದರೂ ಉಪಯೋಗಿಸಬಹುದು!

ಇನ್ನು, ಹವ್ಯಕರ ಅತಿಥಿ ಉಪಚಾರದ ಎರಡನೇ ಹಂತಕ್ಕೆ ಬರೋಣ. ಬಂದ ಅತಿಥಿಗಳಿಗೆ ಊಟ, ತಿಂಡಿ, ಯಾ ನೀರಡಿಕೆಯ ವ್ಯವಸ್ಥೆ. ಹವ್ಯಕ ಆರ್ಥಿಕವಾಗಿ ಎಷ್ಟೇ ಬಡವನಾಗಿರಲಿ, ಮನೆಯಲ್ಲೇ ಇದ್ದ ತಿಂಡಿ ತಿನಿಸುಗಳಿಂದ ಬಂದ ಅತಿಥಿಯ ಉಪಚಾರ ಮಾಡಲು ಶತ ಪ್ರಯತ್ನ ಮಾಡುತ್ತಾನೆ. ತಮ್ಮ ತೋಟದಲ್ಲೇ ಬಿಟ್ಟ ಬಾಳೆ ಹಣ್ಣು, ಸಂಡಿಗೆ, ಬಿಸಿ ಬಿಸಿ ಚಾ, ಇತ್ಯಾದಿ ಅಂತೂ ಇದ್ದೆ ಇರುತ್ತದೆ. ನಾನು ನೋಡಿದ ಹಾಗೆ, ಹವ್ಯಕರಿಗೆ, ಬಂದ ಅತಿಥಿಗಳು ಎಷ್ಟು ತಿಂದು ಉಂಡರೂ ಸಮಾಧಾನವಾಗುವದಿಲ್ಲ! ಅಷ್ಟೇ ಅಲ್ಲಾ, ಅತಿಥಿ ಕೇವಲ ಚಾ ಯಾ ತಿಂಡಿಗೆ ಬಂದು ಹೋದರೆ ಊಟ ಮಾಡಿ ಹೋಗಿಅನ್ನುವ ಒತ್ತಾಯ! ಕೇವಲ, ಊಟಕ್ಕೆ ಬಂದರೆ, “ಇವತ್ತು ಒಂದು ರಾತ್ರಿ ನಮ್ಮ ಜೊತೆ ಇದ್ದು ಹೋಗಿಅನ್ನುವ ನಮ್ರ ವಿನಂತಿ!

ಹೆಚ್ಚಾಗಿ ಹವ್ಯಕರಿಗೆ, ಎಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಅತಿಥಿಗಳು ಬರುತ್ತಾರೋ ಅಷ್ಟೇ ಖುಷಿ. ಬಂದ ಅತಿಥಿಗಳಿಗೆ ಬೇರೆ ಬೇರೆ ರೀತಿಯ ತಿಂಡಿ ತೀರ್ಥ ಮಾಡುವುದೇ ಒಂದು ತರಹದ ಸಂತೋಷ. ಮಾವಿನ ಹಣ್ಣು ಬಿಡುವ ಕಾಲವಾದರೆ, “ಪೂರಿ, ರಾಸಾಯನಿ / ಶೀಕರಣಿ“, ಹಲಸಿನ ಹಣ್ಣಿನ ತಿಂಗಳಾದರೆ, “ಕಡಬು” “ಹಲಸಿನ ಹಣ್ಣಿನ ತೆಳ್ಳೇವು“, ಬಹಳ ವಿಶೇಷ ದಿನ ಆದರೆ ಕೇಸರಿ“, ಏನೂ ಇಲ್ಲಾ ಅಂದರೆ, “ಬಿಸಿ ಬಿಸಿ ಶಿರಾ“, ದಿಡೀರ ತಯಾರ್! ಹವ್ಯಕರ ಚಹಾದ ಯಾ ಬೇರೆ ಬೇರೆ ನೀರಡಿಕೆಯಲ್ಲೂ ಬಹಳ ಪ್ರಭೇದಗಳು! ಸಿಹಿ ಚಾ, ಚಪ್ಪೆ ಚಾ, ಕಾಪಿ, ಬಿಷನಿರು, ಚಪ್ಪೆ ಕಷಾಯ, ಸಿಹಿ ಕಷಾಯ, ಪಾನಕ, ಮಜ್ಜಿಗೆ ತಂಬ್ಳಿ ಇತ್ಯಾದಿ. ಎಲ್ಲರಿಗೂ ಎಲ್ಲಾ ರೀತೀಯ ಪಾನೀಯದ ವ್ಯವಸ್ಥೆ ಸದಾಕಾಲ!

ಹವ್ಯಕರಲ್ಲಿ ಈ ಆತಿಥ್ಯ ಸಂಸ್ಕೃತಿ ಬರಲು ಹಲವಾರು ಕಾರಣಗಳಿರಬಹುದು. ನನ್ನ ಅನುಭವದ ಪ್ರಕಾರ, ಹವ್ಯಕರ ಮನೆಗಳು ಇರುವ ಸ್ಥಳ ಬಹಳ ದೂರ ದೂರ. ಹಳ್ಳಿಗಳೂ ಕೂಡ ಸಣ್ಣ ಸಣ್ಣದು. ಉದಾಹರಣೆಗೆ, ಬ್ಬ ಹವ್ಯಕನ ಮನೆಯಿಂದ ಇನ್ನೊಬ್ಬನ ಮನೆಗೆ ಹೋಗಬೇಕೆಂದರೆ, ೬ ಕಿಲೋ ಮೀಟರ್ ಹೋಗಬೇಕು, ಯಾಕೆಂದರೆ, ಮಧ್ಯದಲ್ಲಿ ಗುಡ್ಡ, ತೋಟ, ಬೆಟ್ಟ, ಹೊಳೆ ಬಂತು! ಹಾಗಾಗಿ, ಹಿಂದಿನ ದಿನಗಳಲ್ಲಿ (ಬಹುಷಃ ೮೦ರ ದಶಕದ ತನಕ), ಯಾರಾದರೂ ಮನೆಗೆ ಬರಬೇಕೆಂದಿದ್ದರೆ, ಅವರು ತಮ್ಮ ಮನೆಯಿಂದ ನಡೆದೇ ಬರಬೇಕಿತ್ತು. ಇಲ್ಲಿ, ಸಂಬಂಧ ಒಂದು ತಾಲೂಕಿನ ಮನೆಯವರಿಂದ ಮತ್ತೊಂದು ತಾಲೂಕಿನ ಜೊತೆ ಇದ್ದರಂತೂ ಇನ್ನೂ ಕಷ್ಟವಾಗಿತ್ತು. ಅವರು ಯಾವುದೋ ಬಸ್ಸು ಹಿಡಿದು, ಹತ್ತಿರದ ಊರಲ್ಲಿ ಇಳಿದು, ೫ ಕಿಲೋಮೀಟರು ನಡೆದು ಬರುತ್ತಿದ್ದರು. ಹಾಗಾಗಿ, ಮನೆಗೆ ಬಂದ ಅತಿಥಿ ೧೨ ದಿನ ಇದ್ದು ಹೋಗುವದು ಸರ್ವೇ ಸಾಮಾನ್ಯವಾಗಿತ್ತು.

ಬಹುಷಃ, ಇನ್ನೊಂದು ಕಾರಣವೆಂದರೆ, ಹೆಚ್ಚಿನ ಎಲ್ಲಾ ಹವ್ಯಕರು ಕೃಷಿಕರು. ಅವರಿಗೆ ಆಗಿನ ಕಾಲದಲ್ಲಿ, ಅತಿಥಿಗಳನ್ನು ಬಿಟ್ಟರೆ ಬೇರೆ ಯಾವುದೇ ಮಾರ್ಗದ ಸಂವಹನ ಯಾ ಸಂಪರ್ಕ ಇರಲಿಲ್ಲ. ಈಗಿನ ಕಾಲದ ಹಾಗೆ, ಟಿವಿ, ದಿನ ಪತ್ರಿಕೆ, ಅಂತರ್ಜಾಲ, ಇತ್ಯಾದಿ ಇವರಿಗೆ ಲಭ್ಯವಿರಲಿಲ್ಲ. ಯಾವುದಾದರೂ ಸುದ್ದಿ ಕೇಳ ಬೇಕಾದರೆ, ಅವರು ತಮ್ಮ ಹತ್ತಿರದ ಮನೆಗೆ ಹೋಗಬೇಕು ಅಥವಾ ಬೇರೆ ಯಾರಾದರೂ ಇವರ ಮನೆಗೆ ಬರಬೇಕು! ಹಾಗಾಗಿ, ಯಾರಾದರೂ ಅತಿಥಿ ಮನೆಗೆ ಬಂದರೆ, ಎಲ್ಲರಿಗೂ ಸಂಭ್ರಮ ಸಡಗರ, ಮತ್ತೆ ಹೊಸ ಸುದ್ದಿ ಸಮಾಚಾರದ ಸಂಗ್ರಹ ಅಥವಾ ಸುದ್ದಿ ವಿನಿಮಯ! ಅಂದರೆ, ಇಲ್ಲಿ ಅತಿಥಿ ಒಂದು ದೃಷ್ಟಿಯಲ್ಲಿ ನಾರದ ಮುನಿ“!

ಮೂಲತಃ, ಹವ್ಯಕರು ಮಾತಿನ ಮಲ್ಲರು. ಕಡಿಮೆ ಮಾತನಾಡುವ ಅಥವಾ ತುಂಬಾ ಗಂಭೀರ ಹವ್ಯಕರನ್ನು ಬಹಳ ಕಡಿಮೆ ಕಾಣಬಹುದು. ನಾವು ಯಾಕೆ ಹೀಗೆ ಅಂತ ನನಗಂತೂ ಗೊತ್ತಿಲ್ಲ, ಆದರೆ ನಮಗೆ ಮಾತುಬೇಕು. ಚಿಕ್ಕವರಿಂದ ಹಿಡಿದು ಮುದುಕರವರೆಗೆ, ಹೆಂಗಸರಾಗಲಿ ಯಾ ಗಂಡಸರಾಗಲಿ, ಅವರು ಎಲ್ಲೇ ಹೋದರು, ಯಾರನ್ನೂ ಮಾತಿಗೆ ಎಳೆಯುತ್ತಾರೆ. ಹಾಗಾಗಿ, ಮನೆಗೆ ಯಾವ ಅತಿಥಿ ಬಂದರೂ, ಅವರ ಜೊತೆ ಮಾತನಾಡುವುದು ಒಂದು ರೀತಿಯಲ್ಲಿ ಎಲ್ಲರಿಗೂ ಮನರಂಜನೆ“. ಎಲ್ಲರೂ, ಅತಿಥಿಯ ಉಪಚಾರದ ನಂತರ, ಒಟ್ಟಿಗೆ ಕುಳಿತು ಮಾತನಾಡುವುದು, ಹಳೆಯ ಕಾಲದಿಂದಲೂ ನಡೆದು ಬಂದ ಪದ್ಧತಿ.

ಕಾಲ ಬದಲಾಗುತ್ತಿದೆ:

ನಾವೆಲ್ಲಾ ನೋಡುತ್ತಿದ್ದಂತೆ, ಕಳೆದ ೨೫೩೦ ವರ್ಷಗಳಲ್ಲಿ ನಮ್ಮ ಹಳ್ಳಿಯ ಜೀವನ ಬದಲಾಗುತ್ತಿದೆ. ಹಳ್ಳಿ ಹಳ್ಳಿಗೂ ಬಸ್ಸಿನ ವ್ಯವಸ್ಥೆ, ಮನೆ ಮನೆಯಲ್ಲಿ ಮೋಟಾರ ಸೈಕಲ್, ಕಾರು, ಇತ್ಯಾದಿ. ಜನ ಸಂಪರ್ಕ ಬಹಳ ಸುಲಭವಾಗುತ್ತಿದೆ. ಇದರೊಂದಿಗೆ, ಟಿವಿ, ದಿನ ಪತ್ರಿಕೆ, ಅಂತರ್ಜಾಲದ ವ್ಯವಸ್ಥೆಯೂ, ಆಗಿದೆ. ಅಂದರೆ, ಮೊದಲಿನ ಹಾಗೆ, ಅತಿಥಿ ಬಹಳಷ್ಟು ಹೊತ್ತು ತಿಥೇಯನ ಮನೆಯಲ್ಲಿ ಇರುತ್ತಿಲ್ಲ. ಅತಿಥಿ ಈಗ ಸಂಪರ್ಕ ಮಾಧ್ಯಮವಾಗಿ ಉಳಿದಿಲ್ಲ. ದೊಡ್ಡ ದೊಡ್ಡ ಕಾರ್ಯಕ್ರಮಗಳಾದ ಮದುವೆ ಮುಂಜಿಯಲ್ಲೂ, ಈಗ ತಮ್ಮ ಸ್ವಂತ ವಾಹನಗಳಿರುವುದರಿಂದ, ಕೇವಲ ಊಟದ ಸಮಯಕ್ಕೆ ಬಂದು ಹೋಗುವ ಪದ್ಧತಿ ಬರುತ್ತಿದೆ!

ಈ ಎಲ್ಲಾ ಬದಲಾವಣೆ ಸಹಜ ಮತ್ತು ವಾಸ್ತವ. ಈ ಮೇಲಿನ ಎಲ್ಲಾ ಸೌಕರ್ಯಗಳೂ ಹಾಗು ಸಂಪರ್ಕ ಮಾಧ್ಯಮಗಳು ನಮ್ಮ ಜೀವನವನ್ನು ಸುಲಭ ಮಾಡಿಕೊಟ್ಟಿದೆ. ಈ ಬದಲಾದ ಪರಿಸ್ಥಿತಿಯಲ್ಲೂ, ನಾವು ನಮ್ಮ ಹವ್ಯಕ ಪರಂಪರೆಯ ಆತಿಥ್ಯಸಂಸ್ಕೃತಿಯನ್ನು ಹೇಗೆ ಉಳಿಸಿಕೊಳ್ಳಬಹುದು ಅನ್ನುವದರ ಬಗ್ಗೆ ಸ್ವಲ್ಪ ಯೋಚಿಸಬೇಕಾಗಿದೆ. ಇಲ್ಲದಿದ್ದಲ್ಲಿ, ನಾವೂ ಬೇರೆಯವರಂತೆ ಕೇವಲ ಹಾಯ್ ಬಾಯ್ಸಂಸ್ಕೃತಿಗೆ ಜಾರಿಬಿಡಬಹುದೇನೋ ಅಂತ ಭಯ!

 

Leave a Reply

Your email address will not be published. Required fields are marked *