Promote your company/organization in our website through advertisements! For more queries, mail us to:  gkmandaladelhi@gmail.com 

 

ಶಾರದಾ ಪೂಜೆಯ ವರದಿ:

 

ದಿನಾಂಕ 20 ಅಕ್ಟೋಬರ್‌ ಮಂಗಳವಾರದಂದು ಎಂದಿನಂತೆ ಈ ಬಾರಿಯೂ ದೆಹಲಿ ಕನ್ನಡ ಶಾಲೆಯ ಆವರಣದಲ್ಲಿ ಶಾರದಾ ಪೂಜಾ ಕಾರ್ಯಕ್ರಮವನ್ನು ವಿಧಿವಿಧಾನಗಳೊಂದಿಗೆ ನೆರವೇರಿಸಲಾಯಿತು. ವಿ. ಸತೀಶ ಭಟ್ಟರ ನೇತೃತ್ವದಲ್ಲಿ  ಕಾರ್ಯದರ್ಶಿಗಳಾದ ಸಂತೋಷ್‌ ಉಪಾಧ್ಯಾಯ ದಂಪತಿಗಳು ಪೂಜೆಯನ್ನು ನೆರವೇರಿಸಿದರು. 60ಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಬಾಗಿಯಾಗಿ ಪ್ರಸಾದ ಸ್ವೀಕರಿಸಿದರು. 

 

ಭೋಜನಾನಂತರ ನಡೆದ ವಾರ್ಷಿಕ ಸಭೆಯಲ್ಲಿ ಪ್ರತಿಭಾ ಪುರಸ್ಕಾರಗಳನ್ನು ವಿತರಿಸಲಾಯಿತು. ಕಾರ್ಯದರ್ಶಿಗಳು ವಾರ್ಷಿಕ ವರದಿಯನ್ನು ಓದಿದರು. ಖಜಾಂಚಿಗಳಾದ ಲಲಿತಾ ಹೆಗಡೆಯವರು ಆಡಿಟ್‌ ಆದ ಆಯವ್ಯಯ ಪತ್ರವನ್ನು ಮಂಡಿಸಿದರು. 

 

ಇದೇ ಸಂದರ್ಭದಲ್ಲಿ ಹಾಜರಿದ್ದ ಪ್ರತಿಭಾ ಪುರಸ್ಕಾರ ಸಮಿತಿಯ ಅಧ್ಯಕ್ಷರಾದ ಪ್ರೊ. ಕೆ.ವಿ ಭಟ್‌ ಅವರು ವಿದ್ಯಾರ್ಥಿ ವೇತನ ನಿಧಿಯ ಮಹತ್ವ ಮತ್ತು ಅದರ ಸದ್ವಿನಿಯೋಗಗಳ ಕುರಿತು ಮಾತನಾಡುತ್ತಾ ಮುಂದಿನ ದಿನಗಳಲ್ಲಿ ಈ ಕಾರ್ಯದ ರೂಪುರೇಷೆ ಹೇಗಿರಬೇಕು ಎಂಬ ಬಗ್ಗೆ ಮಾಹಿತಿ ನೀಡಿದರು. ಏತನ್ಮಧ್ಯೆ ಕ್ರೀಡೆ ಹಾಗೂ  ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಪುಟಾಣಿ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಮಂಡಳದ  ಸದಸ್ಯರು ಹಲವರು ಭಕ್ತಿಗೀತೆಗಳನ್ನು ಹಾಡಿದರು.

 

ಅಧ್ಯಕ್ಷರಾದ ಪ್ರಸಾದ ಭಟ್‌ ಅವರು ಮಾತನಾಡುತ್ತಾ ನಮ್ಮ ಸಮುದಾಯವು ಕೇವಲ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮುಂದಿದ್ದರೆ ಸಾಲದು ಇದು ರಾಜಕೀಯವಾಗಿಯೂ ಮುಂದುವರಿದಾಗಲೇ ನಮ್ಮ ಹಕ್ಕುಗಳಿಗೆ ನ್ಯಾಯ ಸಿಗಬಲ್ಲದು ಎಂದು ಕಿವಿಮಾತು ಹೇಳಿದರು. 

 

ಹಾಜರಿದ್ದ ಸರ್ವಸದಸ್ಯರೂ ಹಾಲೀ ಕಾರ್ಯಕಾರಿಣಿ ಸಮಿತಿಯೇ ಮುಂದಿನ ಒಂದು ವರ್ಷ ಮುಂದುವರಿಯಲೆಂದು ಸರ್ವಾನುಮತದಿಂದ ಠರಾವು ಮಾಡಿದರು. 

ಕಾರ್ಯಕ್ರಮದ ಕೊನೆಗೆ ಕಾರ್ಯದರ್ಶಿಗಳು ವಂದನಾರ್ಪಣೆ ಮಾಡಿದರು. 

 

ಹೊರಾಂಗಣ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ರಾಮಚಂದ್ರ ಭಟ್‌ ಅವರು ಬಹುಮಾನಗಳನ್ನು ವಿತರಿಸಿದರು. 

ಸಮಾಜಮುಖಿ ಕಾರ್ಯಗಳಲ್ಲಿ ಗೋಕರ್ಣಮಂಡಲದ ಕೊಡುಗೆ ಅಪಾರ–ರಾಮಚಂದ್ರ ಭಟ್

 

ಗೋಕರ್ಣ ಮಂಡಲವು ಅಕ್ಟೋಬರ್ 2, 2025 ರಂದು ಲೋದಿ ಎಸ್ಟೇಟ್ ನಲ್ಲಿರುವ ದೆಹಲಿ ಕನ್ನಡ ಶಾಲೆಯಲ್ಲಿ ಶಾರದಾ ಪೂಜೆಯನ್ನು ಆಚರಿಸಿತು. 50 ಕ್ಕೂ ಹೆಚ್ಚು ಸದಸ್ಯರು ಒಟ್ಟುಗೂಡಿ ಸರಸ್ವತಿ ದೇವಿಯನ್ನು ಪೂಜಿಸಿ ಆಶೀರ್ವಾದ ಪಡೆದರು. ವಿದ್ವಾನ್ ಶ್ರೀ ಸತೀಶ್ ಭಟ್ ಅವರ ಸಮರ್ಥ ಮಾರ್ಗದರ್ಶನದಲ್ಲಿ ಕಾರ್ಯದರ್ಶಿಗಳಾದ ಶ್ರೀ ಗಣೇಶ್ ಹೆಗಡೆ ಮತ್ತು ಶ್ರೀಮತಿ ಮೇಖಲಾ ಗಣೇಶ್ ಅವರು ಪೂಜೆಯನ್ನು ನೆರವೇರಿಸಿದರು.

ಪೂಜಾ ಕಾರ್ಯಕ್ರಮದ ಬಳಿಕ ಶ್ರೀಮತಿ ಅನುರಾಧಾ ಹೆಗಡೆ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಭೆಯಲ್ಲಿ ಮಂಡಲದ ಹಿರಿಯ ಸದಸ್ಯರಾದ ಶ್ರೀ ರಾಮಚಂದ್ರ ಭಟ್ ಸಿ.ಎ ಮತ್ತು ಡಾ. ಅನಿಲ್ ಭಟ್ ಅವರನ್ನು ಸಮಾಜಕ್ಕೆ ಅವರು ನೀಡಿದ ಸೇವೆಗಾಗಿ ಸನ್ಮಾನಿಸಲಾಯಿತು. 

ಸನ್ಮಾನಿತರು ತಾವು ನಡೆದು ಬಂದ ದಾರಿಯನ್ನು ಸ್ಮರಿಸಿಕೊಳ್ಳುತ್ತಾ ಮುಂದಿನ ತಲೆಮಾರಿನವರು ಹವ್ಯಕ ಸಂಸ್ಕೃತಿಯನ್ನು ಶ್ರದ್ಧೆಯಿಂದ ಅನುಸರಿಸಿಕೊಂಡು ಹೋಗಬೇಕಾದ ಅಗತ್ಯವಿದೆ ಎಂದು ಕಿವಿಮಾತು ಹೇಳಿದರು.

 

ಇದೇ ಸಂದರ್ಭದಲ್ಲಿ ಮಂಡಲದ ಬಹುನಿರೀಕ್ಷಿತ ಸ್ಮರಣ ಸಂಚಿಕೆಯಾದ ಗೋಕರ್ಣವಾಣಿಯನ್ನು ಗೌರವಾನ್ವಿತ ಅತಿಥಿಗಳು ಬಿಡುಗಡೆ ಮಾಡಿದರು. 

ನಂತರ ಪ್ರತೀ ವರ್ಷ ನೀಡುತ್ತಾ ಬಂದಿರುವ ವಿದ್ಯಾರ್ಥಿ ಪ್ರೋತ್ಸಾಹ ನಿಧಿಯನ್ನು ಅರ್ಹ ಮೂವರು ವಿದ್ಯಾರ್ಥಿಗಳಿಗೆ ನೀಡಲಾಯಿತು.

ನಂತರ ನೆರೆದ ಸದಸ್ಯರು ಹೊಸ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಿದರು. ನೂತನ ಅಧ್ಯಕ್ಷರಾಗಿ ಶ್ರೀ ಪ್ರಸಾದ್ ಭಟ್, ಉಪಾಧ್ಯಕ್ಷರಾಗಿ ಶ್ರೀ ಗಣೇಶ್ ಭಟ್, ಪ್ರಧಾನ ಕಾರ್ಯದರ್ಶಿಗಳಾಗಿ – ಶ್ರೀ ಸಂತೋಷ್ ಉಪಾಧ್ಯಾಯ, ಜಂಟಿ ಕಾರ್ಯದರ್ಶಿಗಳಾಗಿ ಶ್ರೀಮತಿ ಕಿರಣ ಭಟ್. ಖಜಾಂಚಿಗಳಾಗಿ ಶ್ರೀಮತಿ ಲಲಿತಾ ಹೆಗಡೆ ಆಯ್ಕೆಯಾದರು. ಆಯ್ಕೆಗೊಂಡ ಕಾರ್ಯಕಾರಿ ಸದಸ್ಯರುಗಳು: ಶ್ರೀಮತಿ ಶಾಲಿನಿ ಪ್ರಶಾಂತ್, ದೀಪಕ್ ಶರ್ಮಾ, ಅಭಿಷೇಕ್ ಡಿ, ಮಹೇಶ್ ಎಸ್, ಭವಾನಿ ಹೆಗಡೆ, ಉಷಾ ಭಟ್, ಯಶಸ್ವಿ ಭಟ್, ಪ್ರತೀಕ್ ಹೆಗಡೆ. 

ಇದೇ ಸಂದರ್ಭದಲ್ಲಿ ತಾಯ್ನಾಡಿಗೆ ಮರಳುತ್ತಿರುವ ಶ್ರೀ ಶ್ರೀಪಾದ ಭಟ್ ಮತ್ತು ಶ್ರೀಮತಿ ರೋಹಿಣಿ ಭಟ್ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಅಧ್ಯಕ್ಷರಾದ ಶ್ರೀಮತಿ ಶಾಲಿನಿ ಪ್ರಶಾಂತ್ ಅವರು ತಮ್ಮ ಕಾರ್ಯಾವಧಿಯಲ್ಲಿ ಸಹಕರಿಸಿದ ಎಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರಿಗೂ ಧನ್ಯವಾದ ಹೇಳಿದರು. ಕಾರ್ಯಕ್ರಮದ ಕೊನೆಯಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಡಾ. ಗಣೇಶ್ ಹೆಗಡೆಯವರು ವಂದನಾರ್ಪಣೆ ಮಾಡಿದರು.

ಎರಡು ದಶಕಗಳ ಹಿಂದೆ ಶ್ರೀ ಸ್ವರ್ಣವಲ್ಲೀ ಸಂಸ್ಥಾನದಿಂದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ದೆಹಲಿಗೆ ಆಗಮಿಸಿ ಪತ್ರಿಕಾ ಗೋಷ್ಠಿಯಲ್ಲಿ ಭಾಗಿಯಾದ ಸಂದರ್ಭ. ಚಿತ್ರದಲ್ಲಿ ನ್ಯಾಯಮೂರ್ತಿ ಶ್ರೀ ರಾಮಾ ಜೋಯಿಸರನ್ನೂ ಒಳಗೊಂಡು ಗೋಕರ್ಣ ಮಂಡಲದ ಇತರ ಸದಸ್ಯರನ್ನು ಕಾಣಬಹುದು. 
Photography by Aditya Satish Hegde
Polish painting by Anvita Pramod Bhat
Photography by Aditya Satish Hegde

|| ಶುಭಾಶಿಷಃ ||

ತಮಗೆಲ್ಲರಿಗೂ ತಿಳಿದಿರುವಂತೆ ಬೇರೆ ಬೇರೆ ಊರುಗಳಿಂದ ಉದ್ಯೋಗವನ್ನರಸಿ ಭಾರತದ ರಾಜಧಾನಿ ದೆಹಲಿಯಲ್ಲಿ ನೆಲೆಸಿರುವ ಹವ್ಯಕ ಬಾಂಧವರ ಪ್ರೇರಣೆಯಿಂದ ಹವ್ಯಕರಿಗಾಗಿ ಸ್ಥಾಪಿಸಲ್ಪಟ್ಟ ‘ಗೋಕರ್ಣಮಂಡಲ’ ಕಳೆದ 43 ವರ್ಷಗಳಿಂದ ಸಾಂಸ್ಕೃತಿಕ, ಧಾರ್ಮಿಕ ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಕಾಲಮಾನಕ್ಕನುಗುಣವಾಗಿ ಅಥವಾ ಭವಿಷ್ಯದ ಪರಿಸ್ಥಿತಿಗನುಗುಣವಾಗಿ ನಮ್ಮ ಸಂಘವು ಅಂತರ್ಜಾಲಪುಟವನ್ನು ಪ್ರಾರಂಭಿಸುವ ಚಿಂತನೆ ತುಂಬಾ ಸ್ವಾಗತಾರ್ಹವಾಗಿದ್ದು ಇದೇ ಬರುವ ದಿನಾಂಕ 15-01-2022 ರಂದು ಉತ್ತರಾಯಣದ ಪುಣ್ಯಕಾಲದಲ್ಲಿ ‘ಗೋಕರ್ಣಮಂಡಲ.ಇನ್’ ಎಂಬ ಅಂತರ್ಜಾಲಪುಟವನ್ನು ಉದ್ಘಾಟಿಸಿ ಅದರ ಸದುಪಯೋಗವನ್ನು ನಾವೆಲ್ಲರೂ ಪಡೆದುಕೊಳ್ಳೋಣ ಎಂಬುದಾಗಿ ಆಶಿಸುತ್ತಾ ಪರಿಪೂರ್ಣ ಜೀವನ ಎಲ್ಲರದಾಗಲಿ, ಜೀವನದಲ್ಲಿ ಎಲ್ಲರೂ ಆನಂದವನ್ನು ಅನುಭವಿಸುವ ಯೋಗ-ಯೋಗ್ಯತೆ ಪಡೆದುಕೊಳ್ಳಲಿ. “ಸರ್ವೇ ಭದ್ರಾಣಿ ಪಶ್ಯಂತು” ಎಲ್ಲರೂ ಮಂಗಲಮಯವಾದುದನ್ನು ನೋಡುವಂತಾಗಲಿ. “ಲೋಕಾಃ ಸಮಸ್ತಾಃ ಸುಖಿನೋ ಭವಂತು”

ವೇದಮೂರ್ತಿ ಸತೀಶ ಭಟ್

ಮಹರ್ಷಿ ಆಶ್ರಮ

Scroll to Top