ನಮ್ಮ ಈ ಸುಂದರ ಭೂಮಿಯ ಪರಿಸರದ ಮಾಲಿನ್ಯಕ್ಕೆ ಕಾರಣವಾದವುಗಳಲ್ಲಿ ಅತಿ ಪ್ರಮುಖವಾದುದು ಹಾಗು ಚಿಂತಾಜನಕ ಪ್ರಮಾಣಕ್ಕೆ ಬೆಳೆದು ನಿಂತಿರುವುದು ಎಂದರೆ ಪ್ಲಾಸ್ಟಿಕ್‌ನ ಬಳಕೆ. ಉತ್ತುಂಗ ಪರ್ವತಗಳ ತುತ್ತತುದಿಯಿಂದ ಹಿಡಿದು, ಆಳವಾದ ಸಮುದ್ರಗಳ ತಳದವರೆಗೂ ತಲುಪಿದೆ ಪ್ಲಾಸ್ಟಿಕ್‌ನ ಅಪಾಯ.
ನಮ್ಮ ನಿತ್ಯದ ಜೀವನ ಶೈಲಿಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ತಡೆಯುವುದು ಅಸಾಧ್ಯವೆನ್ನುವಂತಾಗಿ ಹೋಗಿದೆ. ಹೀಗಿರುವಾಗ ಸಾಧ್ಯವಾದಷ್ಟು ಕಡಿಮೆ ಬಳಕೆಯ ಅಭ್ಯಾಸವನ್ನು ಮಾಡಲು ನಾವು ಪ್ರಯತ್ನಿಸಬೇಕು. ಜೊತೆಗೆ, ಜವಾಬ್ದಾರಿಯೊಂದಿಗೆ ಬಳಸುವತ್ತ ಕಾಳಜಿವಹಿಸಬೇಕು.
ತ್ಯಾಜ್ಯವಸ್ತುಗಳಿಂದ ಪ್ಲಾಸ್ಟಿಕ್ಅನ್ನು ಬೇರ್ಪಡಿಸುವುದೇ ಈಗ ಒಂದು ದೊಡ್ಡ ಸಮಸ್ಯೆಯಾಗಿದೆ. ಸಣ್ಣ ತುಂಡುಗಳು ಹಾಗೆಯೇ ಉಳಿದು ಹೋಗಿ, recyclingಗೆ ಹೋಗದೆ, ಭೂಮಿ ಮಾಲಿನ್ಯಕ್ಕೆ ಕಾರಣವಾಗುತ್ತಿವೆ. ಆದ್ದರಿಂದ ಪ್ಲಾಸ್ಟಿಕ್ ಕವರ್ ಗಳನ್ನು ಕತ್ತರಿಸುವಾಗ ಅವುಗಳಿಂದ ಸಣ್ಣ ತುಂಡುಗಳು ಬೇರೆಯಾಗದಿದ್ದ ಹಾಗೆ ಎಚ್ಚರಿಕೆ ವಹಿಸಲು ಕೆಲವು ಉಪಾಯಗಳನ್ನು ಈ ಚಿತ್ರಗಳಲ್ಲಿ ತೋರಿಸಲಾಗಿದೆ.
ಹಾಲು, ಎಣ್ಣೆ, ಮಸಾಲೆ ಪುಡಿಗಳು, ಇತ್ಯಾದಿಗಳ ಪ್ಯಾಕೆಟ್ಗಳನ್ನು ಹೀಗೆ ಕತ್ತರಿಸಿ ಬಳಸುವುದರಿಂದ ಸಣ್ಣ ಪ್ಲಾಸ್ಟಿಕ್ ತುಂಡುಗಳ ಸಮಸ್ಯೆಯನ್ನು ಬಗೆಹರಿಸಬಹುದು.
ಇನ್ನು, ಪ್ಲಾಸ್ಟಿಕ್ ಕವರನ್ನು ಮರು ಬಳಸುವ ಇಚ್ಛೆಯಿದ್ದಲ್ಲಿ, ಮೊದಲು ಒಂದು ತುದಿಯಲ್ಲಿ ಸ್ವಲ್ಪ ಕತ್ತರಿಸಿ, ಕವರ್ ಖಾಲಿಯಾದ ನಂತರ ಒಂದು ಬದಿಯಲ್ಲಿ ಪೂರ್ತಿಯಾಗಿ ಕತ್ತರಿಸಿ ಬಳಸಬಹುದು.
ಪ್ರತಿಯೊಬ್ಬರ ಮನೆಯಲ್ಲೂ ಈ ರೀತಿಯ ಹಲವಾರು ಉಪಾಯಗಳು ಅಭ್ಯಾಸದಲ್ಲಿರುತ್ತವೆ. ನಮ್ಮೊಂದಿಗೆ ಹಂಚಿಕೊಳ್ಳಿ. Reuse, Recycle, Reduce ನಮ್ಮೆಲ್ಲರ ಅಭ್ಯಾಸ ವಾಗಲಿ.
ಶಾಲಿನಿ ಪ್ರಶಾಂತ್