ಕಿರಣ ಭಟ್‌

ತಂಪಾದ ಪೇಯಗಳು!!

ವಾಟರ್ಮೆಲನ್ ಸ್ಲಷ್. watermelon slush

ಬೇಕಾಗುವ ಸಾಮಗ್ರಿಗಳು:
ಕಲ್ಲಂಗಡಿ ಹಣ್ಣು 1
ಸಕ್ಕರೆ ಬೇಕಾಗುವಷ್ಟು
ಪುದೀನಾ ಸೊಪ್ಪು5-6ಎಲೆಗಳು
ನಿಂಬೆಹುಳಿ 1
 
ಮಾಡುವ ವಿಧಾನ:
ಕಲ್ಲಂಗಡಿ ಹಣ್ಣನ್ನು ಸಣ್ಣಕ್ಕೆ ಹೆಚ್ಚಿ ಅದಕ್ಕೆ ಪುದೀನ ಎಲೆ , ಸಕ್ಕರೆ, ನಿಂಬೆಹುಳಿ ರಸವನ್ನೂ ಹಾಕಿ ಮಿಕ್ಸಿಯಲ್ಲಿ  ಗ್ರೈಂಡ್ ಮಾಡಿ  ಒಂದು ಟ್ರೇಮೇಲೆಸೋಸಿ  ಹಾಕಬೇಕು.  ನಂತರ ಅದನ್ನು ಫ್ರೀಜರ್ ನಲ್ಲಿ 4-5 hrs ಇಡಬೇಕು. ಆಮೇಲೆ ಅದನ್ನು ಒಂದು ಗ್ಲಾಸಿಗೆ ಟ್ರೇ ಇಂದ Fork ನ ಸಹಾಯದಿಂದ scrape ಮಾಡಿ ಹಾಕಬೇಕು. ಇಲ್ಲದಿದ್ದರೆ ಅದ ಸಣ್ಣ ತುಂಡು ಗಳನ್ನಾಗಿ ಮಾಡಿ ಮಿಕ್ಸಿಯಲ್ಲಿ 3-4 ಸರ್ತಿ ತಿರುಗಿಸಿ ಒಂದು ಗ್ಲಾಸಿಗೆ ಹಾಕಿ . ಪುದೀನಾ ಸೊಪ್ಪನ್ನು ಅದರ ಮೇಲೆ ಇಡಿ. ರುಚಿಯಾದ ಕಲ್ಲಂಗಡಿ ಸ್ಲಶ್ ರೆಡಿ.
 

ಮಾವಿನಕಾಯಿ ಪನ್ನಾ

 
ಬೇಕಾಗುವ ಸಾಮಗ್ರಿಗಳು:

ಮಾವಿನಕಾಯಿ 1
ಸಕ್ಕರೆ ಅಥವಾ ಬೆಲ್ಲ
ಜೀರಿಗೆ ಹುಡಿ 1ಚಮಚ
ಕಪ್ಪು ಉಪ್ಪು Black Salt

ಮಾಡುವ ವಿಧಾನ –

ಮೊದಲು ಮಾವಿನ ಕಾಯಿಯ ಸಿಪ್ಪೆಯನ್ನು ತೆಗೆದು ಚೆನ್ನಾಗಿ ಬೇಯಿಸಬೇಕು. ನoತರ ಅದಕ್ಕೆ ಬೇಕಾಗುವಷ್ಟು ಸಕ್ಕರೆ ಅಥವಾ ಬೆಲ್ಲ ವನ್ನು ಹಾಕಿ ಮಿಕ್ಸಿಯಲ್ಲಿ ಹಾಕಿ ಗ್ರೈಂಡ್ ಮಾಡಬೇಕು ನಂತರ ಅದಕ್ಕೆ ನಮಿಗೆ ಬೇಕಾಗುವಷ್ಟು ನೀರನ್ನು ಹಾಕಿ ಸೋಸಬೇಕು. ಆಮೇಲೆ ಅದಕ್ಕೆ ಜೀರಿಗೆ ಹುಡಿ, ಕಪ್ಪು ಉಪ್ಪನ್ನು ಹಾಕಿ ಚೆನ್ನಾಗಿ ಕರಡಿಸಬೇಕು. ನಂತರ ಅದನ್ನು ಗ್ಲಾಸ್ಸಿಗೆ ಹಾಕಿ ಸ್ವಲ್ಪ ಹೊತ್ತು ಫ್ರಿಡ್ಜ್ ನಲ್ಲಿ ಇಟ್ಟುserve ಮಾಡಿ.

 

Leave a Reply

Your email address will not be published. Required fields are marked *